1
00:00:02,000 --> 00:00:07,000
Downloaded from
YTS.BZ

2
00:00:04,672 --> 00:00:10,678
Fallout ಫಾಲ್ ಔಟ್
ದ ಗೌಲ್ ಲಾಗ್

3
00:00:08,000 --> 00:00:13,000
Official YIFY movies site:
YTS.BZ

4
00:00:16,058 --> 00:00:19,937
ಹೂಂ, ಇದು ಹೂವಿಲ್ ಅಲ್ಲ, ಆದರೂ ಪರವಾಗಿಲ್ಲ.

5
00:00:21,313 --> 00:00:25,401
ಕ್ರಿಸ್ಮಸ್ ಮುಗಿಯೋವರೆಗೂ
ಬೇಕಾಗುವಷ್ಟು ವಯಲ್ಸ್ ಇವೆ.

6
00:00:27,153 --> 00:00:28,446
ಇದನ್ನು ನೋಡಿ.

7
00:00:28,529 --> 00:00:33,451
ಇದು ಮರದ ದಿಮ್ಮಿ ಅಲ್ಲ,
ಇದು ಒಬ್ಬ ಮನುಷ್ಯನ ತೋಳು.

8
00:00:33,534 --> 00:00:35,619
ಅದೂ ಧಡೂತಿ ಮನುಷ್ಯನದ್ದು.

9
00:00:36,412 --> 00:00:38,622
ಚೆನ್ನಾಗಿ ಸುಡುತ್ತೆ, ಅಲ್ವಾ?

10
00:00:39,540 --> 00:00:40,666
ಆಶ್ಚರ್ಯ ಆಯಿತಾ?

11
00:00:41,625 --> 00:00:44,170
ನಾನು ವರ್ಷ ಪೂರ್ತಿ ಇಂತಹ ಕೆಲವು ತೋಳುಗಳನ್ನ
ಒಣಗಲು ಬಿಟ್ಟಿರುತ್ತೇನೆ,

12
00:00:44,253 --> 00:00:46,630
ಚಳಿಗಾಲದಲ್ಲಿ ಬಳಸಲು ಚೆನ್ನಾಗಿರುತ್ತೆ ಅಂತ.

13
00:00:46,714 --> 00:00:50,593
ತೋಳಿದ್ದಲ್ಲಿ, ಬೆಚ್ಚಾಗಿರುತ್ತೆ.
ನಾನು ಯಾವಾಗಲೂ ಅದನ್ನೇ ಹೇಳೋದು.

14
00:00:54,847 --> 00:00:58,017
ನಾನು ನಿಮಗೆ ಹಬ್ಬದ ಶುಭಾಶಯ ಹೇಳುವವನಿದ್ದೆ,

15
00:00:58,100 --> 00:01:02,313
ಆದರೆ ಇಲ್ಲಿ ಹಬ್ಬಗಳು ಅಂತ ಈಗ ನಡೆಯಲ್ಲ.

16
00:01:02,938 --> 00:01:06,192
ಮತ್ತು ಖಂಡಿತ ಇಲ್ಲಿ ಸಾಂಟಾ ಕ್ಲಾಸ್ ಕೂಡ ಇಲ್ಲ.

17
00:01:08,569 --> 00:01:10,070
ಮಾತಾಡಿ ಬಾಯೆಲ್ಲಾ ನೋಯುತ್ತಿದೆ,

18
00:01:10,154 --> 00:01:13,991
ಹಾಗಾಗಿ ಸ್ವಲ್ಪ ಹೊತ್ತು
ನೀವೆಲ್ಲಾ ಈ ಬೆಂಕಿಯನ್ನು ನೋಡಿ.

19
00:01:15,284 --> 00:01:19,205
ಈಗ, ನನಗೆ ನಿದ್ದೆ ಬಂದರೆ,
ನನ್ನ ತಲೆಯನ್ನ ಅದರಿಂದ ದೂರಕ್ಕೆ ವಾಲಿಸಿ.

20
00:01:22,374 --> 00:01:28,631
ಹೌದು, ಇದು ನಾನೇ, ಮಿ. ನ್ಯೂ ವೇಗಸ್,
ನೇರವಾಗಿ ನನ್ನದೇ ಹೆಸರಿನ ಕಾರ್ಯಕ್ರಮದಿಂದ,

21
00:01:28,714 --> 00:01:33,969
ನಿಮಗಾಗಿ ಕ್ರಿಸ್ಮಸ್ ಹಬ್ಬದ
ನೆಚ್ಚಿನವುಗಳನ್ನು ತರುತ್ತಿದ್ದೇನೆ.

22
00:01:34,053 --> 00:01:36,555
ಈಗ, ನೀವು ಇರುವಲ್ಲಿ,
ಬೆಚ್ಚಗಿದೆ, ಚೆನ್ನಾಗಿದೆ ಅಂದುಕೊಳ್ಳುವೆ,

23
00:01:36,639 --> 00:01:39,475
ಮತ್ತು ಅದು ನೀವು
ಪ್ರಜ್ಞೆ ತಪ್ಪುವುದರಿಂದ ಅಲ್ಲ ಅಂದುಕೊಳ್ಳುವೆ,

24
00:01:39,558 --> 00:01:42,436
ನಿಮಗೆ ಅದೇ ಮಾಡಲು ಇಷ್ಟ ಇದ್ದರೆ
ಅದು ಬೇರೆ ವಿಷಯ ಬಿಡಿ.

25
00:01:42,520 --> 00:01:48,108
ನಾವೆಲ್ಲಾ ನಮ್ಮದೇ ಮದ್ದುಗಳೊಂದಿಗೆ
ನಮ್ಮ ಜೀವನದ ಭಯಾನಕತೆಗಳನ್ನು ಹೋರಾಡುತ್ತೇವೆ.

26
00:01:48,734 --> 00:01:51,111
ನಾನು ರಾತ್ರಿಯಿಡೀ
ನಿಮ್ಮ ಸಮರ್ಪಣೆಗಳನ್ನು ಸ್ವೀಕರಿಸುತ್ತಾ,

27
00:01:51,195 --> 00:01:57,284
ನಿಮ್ಮ ಕ್ರಿಸ್ಮಸ್ ಶುಭಾಶಯಗಳನ್ನು,
ಹೃತ್ಪೂರ್ವಕ ಕಥೆಗಳನ್ನೋದುವೆ, ನೇರ ಪ್ರಸಾರದಲ್ಲಿ.

28
00:01:58,869 --> 00:02:02,331
ಮುಂಚಿನ ಅರಿಜೋನಾದಿಂದ ಇದು ಬಾಬ್‌ನ ಕಥೆ.

29
00:02:02,414 --> 00:02:06,418
ಅವರು ಹೀಗೆ ಬರೆದಿದ್ದಾರೆ.
"ನನ್ನ ನಾಯಿ ಕ್ರಿಸ್ಮಸ್ ಹಿಂದಿನ ದಿನ ಓಡಿಹೋಯಿತು,

30
00:02:06,502 --> 00:02:10,965
"ಮತ್ತು ನಿಜ ಹೇಳುವೆ, ಕ್ರಿಸ್ಮಸ್ ಕಥೆಯೇ
ಪುನರಾವರ್ತಿಸಿದಂತೆ ಅನಿಸಿತು."

31
00:02:11,048 --> 00:02:15,135
"ಎಲ್ಲಿಂದಲೋ ಅಪರಿಚಿತರು ಬಂದು
ಅದನ್ನು ಹುಡುಕಲು ಸಹಾಯ ಮಾಡಿದರು,

32
00:02:15,219 --> 00:02:18,347
"ಓರಿಯಂಟ್ ಆರ್‌ನ ಮೂರು ರಾಜರುಗಳಂತೆಯೇ."

33
00:02:18,430 --> 00:02:21,100
"ನಾನು ಅವರಲ್ಲೊಬ್ಬ ರಾಜನಂತೆ
ಕೆಲಸ ಮಾಡುತ್ತಿದ್ದೆ,

34
00:02:21,183 --> 00:02:25,145
ಮತ್ತು ದೇವರು ಎಲ್ಲಾ ರಾಜರ ರಾಜ."

35
00:02:25,229 --> 00:02:30,317
"ಹಾಗಾಗಿ ಐದು ರಾಜರಿದ್ದರು,
ಆದರೆ ನಾವು ಒಟ್ಟು ಏಳು ಮಂದಿ ಇದ್ದೆವು."

36
00:02:30,401 --> 00:02:33,863
"ಇಬ್ಬರು ಮಹಿಳೆಯರು, ಐವರು ಪುರುಷರು,
ಹಾಗಾಗಿ ಐದು ರಾಜರು."

37
00:02:33,946 --> 00:02:38,909
"ಎರಡು ರಾಣಿಯರು, ಜೊತೆಗೆ ನಾನು ಮತ್ತು ದೇವರು,
ಅಂದರೆ ಒಟ್ಟಿಗೆ ಒಂಬತ್ತು ರಾಜರು,

38
00:02:38,993 --> 00:02:40,494
ರಾಣಿಯರೂ ಸೇರಿದಂತೆ."

39
00:02:41,036 --> 00:02:44,498
"ಆದರೆ ಈ ನಾಯಿ ಎಲ್ಲಿತ್ತು ಅಂತ
ನಮಗೆ ಯಾರಿಗೂ ಗೊತ್ತಿರಲಿಲ್ಲ."

40
00:02:44,582 --> 00:02:49,169
"ಅದಕ್ಕೇ ನಾನು 'ಇದು ಅಸಲಿ
ಯೇಸುವಿನ ಕಥೆ ಥರ ಇದೆಯಲ್ಲಾ?

41
00:02:49,253 --> 00:02:52,006
'ಆ ನಾಯಿ ಶಿಶು ಯೇಸು ಇದ್ದಂತೆ' ಅಂದುಕೊಂಡೆ."

42
00:02:52,089 --> 00:02:54,592
"ನನಗೆ ತುಂಬಾ ಒತ್ತಡವಾಗತೊಡಗಿತು.

43
00:02:54,675 --> 00:02:57,761
ಯಾಕೆಂದರೆ ನಾಯಿ ಕಳೆದುಹೋಗಿದ್ದು ಮಾತ್ರವಲ್ಲ,

44
00:02:57,845 --> 00:03:00,389
ಯಾರಾದರೂ ಬರುವಾಗ ಅದು ನನಗೆ ಹೇಳುತ್ತಿತ್ತು
ಅಂತ ಕೂಡ."

45
00:03:00,472 --> 00:03:03,767
"ಈ ಮನುಷ್ಯರು ಬರುತ್ತಾರೆ. ಆದರೆ ಅದು ಸಿಗಲ್ಲ."

46
00:03:03,851 --> 00:03:07,980
"ಜೊತೆಗೆ, ನನ್ನ ಬಳಿ ಮದ್ದು ಇದೆಯಾ ಅಂತ
ಅವರು ಕೇಳುತ್ತಲೇ ಇರುತ್ತಾರೆ."

47
00:03:08,063 --> 00:03:10,608
"ನನ್ನ ಬಳಿ ಇದೆ, ಆದರೆ ನಾನು ಕೊಡಲ್ಲ."

48
00:03:10,691 --> 00:03:14,194
"ನನಗೆ ಕೋಪ ಬರುತ್ತಿದೆ, ಮತ್ತು ಅದು
ನನ್ನಲ್ಲಿ ತಪ್ಪಿತಸ್ಥ ಭಾವನೆ ಮೂಡಿಸುತ್ತಿದೆ."

49
00:03:14,278 --> 00:03:16,739
"ಹೌದು, ನಾನು ಮುಂಗೋಪಿ,

50
00:03:16,822 --> 00:03:20,659
ಆದರೆ ಅದಕ್ಕೇ ನಾನು ಮದ್ದು ಬಿಟ್ಟು ಇರಲು ಆಗಲ್ಲ."

51
00:03:20,743 --> 00:03:21,577
"ಅವು ಔಷಧಿಗಳು."

52
00:03:21,660 --> 00:03:24,830
"ಇರಲಿ, ನಾಯಿ ಹೆಚ್ಚೇನೂ ದೂರ ಹೋಗಿರಲಿಲ್ಲ."

53
00:03:24,914 --> 00:03:28,042
"ನಾನು ಸ್ವಲ್ಪ ಹೊತ್ತು ಮುಂಚೆ
ಕೆಲವು ಜನರನ್ನು ಮುಗಿಸೋದು ನೋಡಿ,

54
00:03:28,125 --> 00:03:30,461
ಹೆದರಿ, ಫಲಕಗಳಲ್ಲಿ ಅಡಗಿದ್ದ."

55
00:03:30,544 --> 00:03:32,588
"ಕೊನೆಗೂ ಹೊರಗೆ ಬಂದ,

56
00:03:32,671 --> 00:03:35,424
ನಾನು ಕೊಂದ ಜನರಲ್ಲಿ ಒಬ್ಬರನ್ನು ಸುಡೋದು ನೋಡಿ."

57
00:03:35,507 --> 00:03:40,471
"ಈಗ, ನಾನು ಉಳಿದ ರಾಜರನ್ನು ಮುಗಿಸುವ ಮುಂಚೆ
ಅದು ನನಗೆ ತಿಳಿದಿದ್ದರೆ ಚೆನ್ನಾಗಿತ್ತು."

58
00:03:40,554 --> 00:03:45,059
"ಆದರೆ ನನಗೆ ತಿಳಿದ ಮಾಹಿತಿ ಇಟ್ಟುಕೊಂಡು
ನಾನು ಮಾಡಬಹುದಾಗಿದ್ದು ಮಾಡಿದೆ."

59
00:03:45,142 --> 00:03:47,478
"ಒಟ್ಟಾರೆ ಹೇಳುವುದಾದರೆ,

60
00:03:47,561 --> 00:03:50,814
ನಾಯಿ ಇಲ್ಲದೆ ಕ್ರಿಸ್ಮಸ್ ಆಚರಿಸುವವರೆಗೂ

61
00:03:50,898 --> 00:03:53,984
ನನಗೆ ಕ್ರಿಸ್ಮಸ್ ಆಚರಿಸಲು
ನಾಯಿ ಬೇಕು ಅಂತ ತಿಳಿದಿರಲಿಲ್ಲ."

62
00:03:54,068 --> 00:03:57,655
"ಎಂತಹ ದಾರುಣ ಕಥೆ ಅಲ್ವಾ?
ನನಗೆ ನನ್ನ ಮೇಲೇ ದ್ವೇಷ ಮೂಡಿದೆ."

63
00:03:59,323 --> 00:04:00,783
ಧನ್ಯವಾದ, ಬಾಬ್.

64
00:04:00,866 --> 00:04:04,453
ಈಗ ನಿಮ್ಮ ತಲೆಯ ತುಂಬಾ ತುಂಬಿದ ಮದ್ದಿಗಿಂತ ಬೇಗ

65
00:04:04,536 --> 00:04:08,666
ನಿಮಗೆ ಆಹ್ಲಾದಕರವೆನಿಸುವ ಸುಂದರ ಸಂಗೀತ ಬರಲಿದೆ.

66
00:11:02,037 --> 00:11:05,123
ಹಾಯ್, ನಾನು ಡಿಜೆ ಮಿ. ನ್ಯೂ ವೇಗಸ್,

67
00:11:05,207 --> 00:11:10,462
ನೀವು ನಿಮ್ಮ ಒಳಉಡುಪಿನಲ್ಲಿ ವಿರಮಿಸುತ್ತಾ,
ಅಲ್ಲಿ ಕೂತು ಕೇಳುವುದನ್ನು ಕಲ್ಪಿಸಿಕೊಂಡರೆ

68
00:11:10,545 --> 00:11:14,758
ನನ್ನ ಕಲ್ಪನೆಗಳು ಗಿರ್ರನೆ ಓಡುತ್ತಿವೆ.

69
00:11:14,841 --> 00:11:16,259
ತಗೊಳ್ಳಿ ಒಂದು ಸಂಗೀತ.

70
00:15:30,597 --> 00:15:33,600
ಗೊತ್ತಾ, ನನಗೆ ಹಳೆಯ ಹಾಡುಗಳು ಇಷ್ಟ,

71
00:15:33,683 --> 00:15:37,812
ಆದರೆ ನಿಮ್ಮ ಕಥೆಗಳನ್ನು ಕೇಳುವಷ್ಟು ಅಲ್ಲ.

72
00:15:37,896 --> 00:15:39,606
ನಾನು ನಿಮ್ಮಿಂದ ಕೇಳಬಯಸುತ್ತೇನೆ.

73
00:15:39,689 --> 00:15:43,151
ಸಿಲ್ಟ್‌ಲ್ಯಾಂಡ್ಸ್‌ನ ಲೇಖಕ
ಸ್ಲಗ್ಗಿನ್ಸ್ ರೆಕ್ಸ್‌ ಅವರಿಂದ

74
00:15:43,234 --> 00:15:47,572
ಒಂದು ಸ್ಮರಣಿಕೆಯ ಗಾಥೆ ಇಲ್ಲಿದೆ.

75
00:15:48,990 --> 00:15:52,619
"ಜನರು ವೇಸ್ಟ್ ಲ್ಯಾಂಡ್‌ನ
ಕ್ರಿಸ್ಮಸ್ ಬಗ್ಗೆ ದೂರಬಹುದು,

76
00:15:52,702 --> 00:15:55,121
ಆದರೆ ಇದು ವಾಲ್ಟ್‌ಗಳಿಗಿಂತ ಉತ್ತಮವಾಗಿದೆ."

77
00:15:55,205 --> 00:16:00,627
"ನನ್ನನ್ನು ನಂಬಿ. ಕಳೆದ ವರ್ಷ ನಾನು ಕ್ರಿಸ್ಮಸ್
ವಾಲ್ಟ್‌ನಲ್ಲಿ ಆಚರಿಸಿದೆ, ದರಿದ್ರವಾಗಿತ್ತು."

78
00:16:00,710 --> 00:16:04,005
"ಅದೇನೋ ಹವಾಯಿಯಲ್ಲಿ ಕ್ರಿಸ್ಮಸ್
ಅನ್ನೋದನ್ನ ಮಾಡುತ್ತಿದ್ದರು

79
00:16:04,089 --> 00:16:06,341
ಮತ್ತದು ಕಳಪೆ ಮತ್ತು ಹೀನಾಯವಾಗಿತ್ತು."

80
00:16:06,424 --> 00:16:09,969
"ಅವರು, 'ಹೇ, ಈ ಕಲುವಾ ಪೋರ್ಕ್ ಪ್ರಯತ್ನಿಸಿ,'
ಅಂತ ಹೇಳಿ,

81
00:16:10,053 --> 00:16:12,430
ಆಮೇಲೆ ನನಗೆ ಕಾಕ್‌‌ಟೈಲ್ ವೀನಿ ಕೊಟ್ಟರು."

82
00:16:12,514 --> 00:16:15,308
"ಎಂತಹ ನಿರಾಶಾದಾಯಕ ಸ್ಥಿತಿ."

83
00:16:15,392 --> 00:16:17,936
"ನಾನು ಜನರ ಸುತ್ತ ಸಮಯ ಕಳೆದು
ಹಲವು ವರ್ಷಗಳಾಗಿದ್ದರೂ,

84
00:16:18,019 --> 00:16:20,897
ಇದು ದರಿದ್ರ ಅಂತ ಹೇಳಬಲ್ಲೆ."

85
00:16:20,980 --> 00:16:23,233
"ಇದು ಒಂದು ರೀತಿಯ
ಕ್ರಿಸ್ಮಸ್ ಉಡುಗೊರೆ ಅನಿಸುತ್ತೆ,

86
00:16:23,316 --> 00:16:26,695
ನೂರು ಪ್ರತಿಶತ ವಾಲ್ಟಿಗಳಿಗಿಂತ

87
00:16:26,778 --> 00:16:29,155
ನೀವು ಆಸಕ್ತಿದಾಯಕ ಅಂತ ಅರಿವಾಗೋದು."

88
00:16:29,239 --> 00:16:32,742
"ಹೀಗಾಗಿ ಸಾಂಟಾ ಕಿವಿ ಕೊಟ್ಟು
ಕೇಳುತ್ತಾನೆ ಅಂದುಕೊಳ್ಳುವೆ."

89
00:16:32,826 --> 00:16:38,081
"ಸಾಂಟಾ, ನೀನು ಕೇಳುತ್ತಿದ್ದರೆ,
ನಿಜವಾದ ಕಲುವಾ ಪೋರ್ಕ್ ಅನ್ನು ವಾಪಸ್ ತಾ."

90
00:16:38,164 --> 00:16:42,085
"ನಾವೆಲ್ಲರೂ ಈ ದೈತ್ಯ ಹಂದಿ ಜೀವಿಗಳು
ವೇಸ್ಟ್ ಲ್ಯಾಂಡಲ್ಲಿ ಸುತ್ತೋದನ್ನ ನೋಡಿದ್ದೇವೆ."

91
00:16:42,168 --> 00:16:46,756
"ಖಂಡಿತ ನೋಡಿದ್ದೇನೆ, ಕನಿಷ್ಟ ಪಕ್ಷ
ಅವು ಎಗರಿಸುವ ಧೂಳನ್ನು ನೋಡಿದ್ದೇನೆ."

92
00:16:46,840 --> 00:16:52,137
"ನಾವೆಲ್ಲಾ ಕೇಳುಗರು ಗುಂಪು ಬೇಟೆಯಾಡಿ,

93
00:16:52,220 --> 00:16:54,514
ಅರ್ಧದಷ್ಟು ಜನ ನೆಲ ಅಗೆದು,

94
00:16:54,597 --> 00:16:59,227
ಎಂದೂ ತಂಪಾಗದ ಬಿಸಿ ಕಲ್ಲುಗಳಿಂದ ತುಂಬಿ,

95
00:16:59,310 --> 00:17:04,566
ಅವುಗಳನ್ನು ಕಲುವಾ ಮಾಡಲು ನೋಡೋಣ."

96
00:17:05,275 --> 00:17:07,235
"ನಾನದನ್ನು ಮಾಡಿ ನೋಡುವೆ. ನನ್ನಾಣೆ."

97
00:17:07,318 --> 00:17:11,948
"ಕೂಡಲೇ ನನ್ನ ಮುಖದಲ್ಲಿ
ಗೆಡ್ಡೆಗಳು ಬೆಳೆಯುತ್ತವಾ ನೋಡೋಣ,

98
00:17:12,031 --> 00:17:14,743
ಅದೇ ಆ ಜೋಳ ಬೆಳೆದ ಸಮಯದಂತೆ."

99
00:17:14,826 --> 00:17:16,870
ನನಗೆ ಸರಿ ಅನಿಸುತ್ತಿದೆ, ಸ್ಲಗ್ಗಿನ್ಸ್.

100
00:17:16,953 --> 00:17:20,248
ನಿನ್ನ ಗುಂಪು ಬೇಟೆಗೆ ಸೇರುವ ಸರದಿಯಲ್ಲಿ
ನಾನೇ ಮೊದಲನೆಯವನಾಗುವೆ.

101
00:17:20,331 --> 00:17:24,878
ಈಗ, ಈ ಅದ್ಭುತ ಹಾಡು ಯಾರು ಗುರುತಿಸಬಲ್ಲಿರಿ?

102
00:22:42,361 --> 00:22:47,075
ನೀವು ಈ ಅದ್ಭುತ ಸಮರ್ಪಣೆಗಳನ್ನು
ಕೇಳುತ್ತಿದ್ದೀರೋ ಇಲ್ಲವೋ

103
00:22:47,158 --> 00:22:50,369
ನಾನಂತೂ ನಿಮ್ಮನ್ನು ಎಂದಿಗೂ ಪ್ರೀತಿಸುವೆ.

104
00:22:50,453 --> 00:22:52,246
ಅದನ್ನು ಏನೂ ಬದಲಿಸಲ್ಲ.

105
00:27:18,804 --> 00:27:22,016
ಜನರೇ, ನನಗೆ ನಿಮ್ಮಲ್ಲಿ ಪ್ರತಿಯೊಬ್ಬರೂ ಇಷ್ಟ.

106
00:27:22,099 --> 00:27:26,062
ನಿಮ್ಮ ಪ್ರೀತಿ ನನ್ನತ್ತ ಪುಟಿದು ಬರೋದು
ನನಗೆ ಭಾಸವಾಗುತ್ತಿದೆ.

107
00:27:26,145 --> 00:27:29,732
ಅಬ್ಬರದ ಅಲೆಯಂತೆ ಅಪ್ಪಳಿಸುತ್ತಿದೆ.

108
00:27:29,815 --> 00:27:32,568
ಸಮರ್ಪಣೆಗಳು ಬರುತ್ತಿರಲಿ.

109
00:36:17,593 --> 00:36:20,304
ಇಲ್ಲಿದೆ ಆ್ಯಂಗ್ರಿ ರಾನ್ ಅವರಿಂದ ಪತ್ರ.

110
00:36:20,387 --> 00:36:26,727
ರಾನ್ ಹೇಳುತ್ತಾರೆ, "ನನಗೆ ಕೋಪ ಯಾಕೆಂದರೆ,
ಪ್ರತಿ ವರ್ಷ ಅವೇ ಕ್ರಿಸ್ಮಸ್ ಹಾಡುಗಳು."

111
00:36:26,810 --> 00:36:29,563
"ಯಾರೂ ನನಗಾಗಿ ಏನೂ ಮಾಡಲ್ಲ ಇತ್ತೀಚೆಗೆ."

112
00:36:29,646 --> 00:36:35,903
"ಯಾವುದೋ 8,000 ಕಿಮೀ ದೂರದ ಮಗು ಬಗೆಗಿನ ಹಾಡಿಗೂ,
ನನಗೂ ಏನು ಸಂಬಂಧ?"

113
00:36:35,986 --> 00:36:40,073
"ನನ್ನ ಅನುಭವಕ್ಕೆ ತಕ್ಕ ಕಲೆಗೆ
ನಾನು ಸ್ಪಂದಿಸುವೆ."

114
00:36:40,157 --> 00:36:45,329
"ವೇಸ್ಟ್ ಲ್ಯಾಂಡ್‌ನಲ್ಲಿ ರಚಿಸಿದ
ಯಾವುದಾದರೂ ಸಮಕಾಲೀನ ಹಾಡು ಹಾಕಿ."

115
00:36:45,412 --> 00:36:48,248
ಕ್ಷಮಿಸು, ರಾನ್, ನೀನು ಕೋಪದಲ್ಲಿರಬಹುದು.

116
00:36:48,332 --> 00:36:52,127
ಆದರೆ ನಮ್ಮ ಕೇಂದ್ರದಲ್ಲಿರೋದು ಈ ಹಾಡುಗಳು ಮಾತ್ರ.

117
00:36:52,210 --> 00:36:56,757
ಉಳಿದೆಲ್ಲವೂ ಡಕಾಯಿತರು ಹಾಕಿದ
ಬೆಂಕಿಯಲ್ಲಿ ಸುಟ್ಟುಹೋಯಿತು.

118
00:36:56,840 --> 00:37:02,971
ಈಗ ಇಂದು ರಾತ್ರಿ ಐದನೇ ಬಾರಿಗೆ,
"ಗಾಡ್ ರೆಸ್ಟ್ ಯೇ ಮೆರಿ ಜಂಟಲ್‌ಮೆನ್."

119
00:45:44,659 --> 00:45:48,538
ನಿಮ್ಮ ಇನ್ನಷ್ಟು ಕ್ರಿಸ್ಮಸ್ ಶುಭಾಶಯಗಳು
ಮತ್ತು ಸಮರ್ಪಣೆಗಳೊಂದಿಗೆ ಹಿಂದಿರುಗುವೆ.

120
00:45:48,621 --> 00:45:53,710
ಆ್ಯಂಡಿ ಸಿ. ಬರೆಯುತ್ತಾರೆ,
"ನನಗೆ ಈ ಹಳೆಯ ಹಾಡುಗಳು ಇಷ್ಟ,

121
00:45:53,793 --> 00:45:56,629
ಆದರೆ ನಾನು ನೂರಾರು ಜನರನ್ನು ತಿಂದಿರುವಾಗ,

122
00:45:56,713 --> 00:46:00,884
ಹೀಗೆ ದೇವರನ್ನು ನೆನೆಯೋದು ತಪ್ಪು ಅನಿಸುತ್ತೆ."

123
00:46:00,967 --> 00:46:05,472
ಪರವಾಗಿಲ್ಲ, ಆ್ಯಂಡಿ,
ನಿಮ್ಮ ಬದಲು ನಮ್ಮ ರೇಡಿಯೋನೇ ಹಾಡಲಿ.

124
00:46:05,555 --> 00:46:09,809
ಆ್ಯಂಡಿ ಮುಂದುವರೆಸುತ್ತಾರೆ,
"ಒಬ್ಬ ವ್ಯಕ್ತಿಯನ್ನು ಕೊಂದ ನಂತರ

125
00:46:09,893 --> 00:46:12,645
'ರುಡಾಲ್ಫ್ ದಿ ರೆಡ್ ನೋಸ್ಡ್ ರೈನ್ ಡೀರ್'
ಹಾಡೋದು ಕಷ್ಟ,

126
00:46:12,729 --> 00:46:15,815
ಆದರೆ ಅವನ ಇಡೀ ಕುಟುಂಬವನ್ನು ತಿಂದ ನಂತರ,

127
00:46:15,899 --> 00:46:21,070
ಅಳದೇ ಆ ಸಂಗೀತ ಗುನುಗುನಿಸೋದೂ ಕಷ್ಟ ಆಗುತ್ತಿದೆ."

128
00:46:21,154 --> 00:46:23,823
"ನೀವು ಜೊತೆಯಲ್ಲಿ ಆಚರಿಸುತ್ತಿದ್ದ
ಜನರನ್ನು ತಿನ್ನೋದು

129
00:46:23,907 --> 00:46:27,702
ಹಬ್ಬದ ಸಂಭ್ರಮವನ್ನು ಸ್ವಲ್ಪ ಕಡಿಮೆ ಮಾಡುತ್ತೆ."

130
00:46:27,785 --> 00:46:31,664
ಮನುಷ್ಯನ ಪಿತ್ತಕೋಶದ ರುಚಿ ನೋಡಿದ ಮೇಲೆ,
ನಾನು ಹಾಡೋದು,

131
00:46:31,748 --> 00:46:33,750
'ಓಹ್, ಪವಿತ್ರ ರಾತ್ರಿಯೇ.

132
00:46:33,833 --> 00:46:36,878
'ಪಿತ್ತ ಬಿಟ್ಟು ಬೇರೆ ಯಾವ ಯೋಚನೆಯೂ ಬರದೇ.'"

133
00:46:36,961 --> 00:46:38,713
"ಪದಗಳನ್ನು ಹಾಡುವುದು ಸುಲಭ,

134
00:46:38,796 --> 00:46:41,216
ಆದರೆ ಪದಗಳಿಗೆ ಈಗ ಯಾವ ಅರ್ಥವೂ ಉಳಿದಿಲ್ಲ."

135
00:46:41,299 --> 00:46:44,511
"ಅಂದರೆ, ಹಿಮಬಂಡಿ ಎಂದರಾದರೂ ಗೊತ್ತಾ?"

136
00:46:45,345 --> 00:46:49,265
"ನಾನು 400 ವರ್ಷಗಳಲ್ಲಿ
ಹಿಮಬಂಡಿಯ ಗಂಟೆಗಳನ್ನು ಕೇಳಿಲ್ಲ ಅನಿಸುತ್ತೆ."

137
00:46:49,349 --> 00:46:52,852
"ಆದರೆ ನನ್ನ ಗೆಳೆಯರ ಮತ್ತು ನೆರೆಯವರ ಚೀರುವ ಶಬ್ದ
ಕೇಳಿದ್ದೇನೆ, ನಾನವರನ್ನು ಕೊಲ್ಲುವಾಗ."

138
00:46:52,936 --> 00:46:56,689
"ಆದರೆ ಒಂಟಿ ಕುದುರೆಯ ತೆರೆದ ಹಿಮಬಂಡಿ ಅರ್ಥಹೀನ."

139
00:46:56,773 --> 00:47:02,695
"ಸೋದರಸಂಬಂಧಿಯನ್ನು ತಿಂದಿದ್ದೇನೆ ಎಂದು
ಒಪ್ಪಿಕೊಂಡಿದ್ದಕ್ಕೆ, ಭೋಜನದಿಂದ ಹೊರಹಾಕಿದ್ದರು."

140
00:47:02,779 --> 00:47:06,699
"ಯಾರನ್ನು ತಿಂದಿರಿ ಅಂತ ತಿನ್ನುವ ಸಮಯದಲ್ಲಿ
ಯಾರ ಮುಂದೆಯೂ ಹೇಳಬಾರದು."

141
00:47:06,783 --> 00:47:10,411
"ನನ್ನ ಜೊತೆ ಇದ್ದ ಜನರು
ಅದು ವಾಂತಿ ಬರಿಸುತ್ತೆ ಅನ್ನುತ್ತಾರೆ."

142
00:47:10,495 --> 00:47:14,916
"ಅದು ನಿಜಾನಾ ಗೊತ್ತಿಲ್ಲ, ಆದರೆ ಅದು ಜನರಿಗೆ
ಕೋಪ ಅಂತೂ ಬರಿಸುತ್ತೆ ಅಂತ ನನಗೆ ಖಂಡಿತ ಗೊತ್ತು."

143
00:47:14,999 --> 00:47:17,377
"ನಾನು ಅಷ್ಟು ಜನರನ್ನು
ತಿನ್ನದೇ ಇದ್ದಿದ್ದರೆ ಚೆನ್ನಾಗಿತ್ತು,

144
00:47:17,460 --> 00:47:20,797
ನನಗೆ ಸಮಾಧಾನ ಹೇಳಲು ಆಗ
ಯಾರಾದರೂ ಇರುತ್ತಿದ್ದರು."

145
00:47:20,880 --> 00:47:23,967
ಹೂಂ, ಆ್ಯಂಡಿ ಸಿ., ನಿಮಗೆ ಸಮಾಧಾನ ಹೇಳಲು ಆಗಲ್ಲ,

146
00:47:24,050 --> 00:47:28,513
ಯಾಕೆಂದರೆ ನೀವು ಮಾಡಿರೋದು ದುಷ್ಟ ಕೆಲಸ.

147
00:47:28,596 --> 00:47:31,349
ಆದರೆ ಅದರ ನಿರ್ಣಯ ದೇವರು ಮಾಡಲಿ.

148
00:47:31,432 --> 00:47:33,226
ಇಗೊಳ್ಳಿ ಒಂದು ಹಳೆಯ ಹಾಡು.

149
00:55:56,395 --> 00:56:00,274
ಸ್ಯಾಂಡಿ ಗಲ್ಚ್‌ನಿಂದ
ಜಾರ್ಜ್ ವಾಷಿಂಗ್ಟನ್ ಥಿಝ್ ಬರೆಯುತ್ತಾರೆ,

150
00:56:00,357 --> 00:56:03,486
"ಯುದ್ಧವು ಎಂದಿಗೂ ಬದಲಾಗುವುದಿಲ್ಲ.
ಕ್ರಿಸ್ಮಸ್ ಕೂಡ."

151
00:56:03,569 --> 00:56:06,447
"ಪ್ರತಿ ವರ್ಷವೂ ಅದೇ ಹಾಡುಗಳು.
ನೀವು ಎಂದಾದರೂ ಗಮನಿಸಿದ್ದೀರಾ?"

152
00:56:07,865 --> 00:56:09,867
ನನಗದು ಇಷ್ಟ ಆಯಿತು, ಜಾರ್ಜ್.

153
00:56:09,950 --> 00:56:14,163
ಗೊತ್ತಾ, ಮರಳಿನ ದಿಬ್ಬಗಳು
ಬದಲಾಗುವ ಸ್ಥಳದಲ್ಲಿ ವಾಸವಿರುವಾಗ,

154
00:56:14,246 --> 00:56:18,626
ನೀವು ನಿಜವಾಗಿಯೂ ಎಲ್ಲಿದ್ದೀರಿ
ಎಂದು ನಿಮಗೆ ತಿಳಿದಿರುವುದಿಲ್ಲ,

155
00:56:18,709 --> 00:56:24,632
ಆಗ ನಿಮಗೆ ಕ್ರಿಸ್ಮಸ್ ಹಾಡುಗಳೇ
ಕಾಲದ ಮಾರ್ಗದರ್ಶನ ನೀಡುವ ನಕ್ಷತ್ರಗಳಂತೆ.

156
00:56:24,715 --> 00:56:29,178
ಅವು ಕೇಳಿತೆಂದರೆ,
ಕ್ರಿಸ್ಮಸ್ ಹತ್ತಿರದಲ್ಲಿದೆ ಎಂದರ್ಥ.

157
01:00:57,529 --> 01:01:02,242
ನಾನು ಡಿಜೆ ಮಿ. ನ್ಯೂ ವೇಗಸ್
ಮತ್ತು ನನಗೆ ನಿಮ್ಮ ಶೈಲಿ ಹಿಡಿಸಿತು.

158
01:01:02,326 --> 01:01:05,287
ನೀವು ನನ್ನನ್ನು ಆಕರ್ಷಿಸಿದಿರಿ. ಅರ್ಥ ಆಯಿತಾ?

159
01:06:56,430 --> 01:07:00,892
ಮತ್ತು ದೀರ್ಘ ಕಾಲದ ಕೇಳುಗರಾದ
ಡಿಇಯ ಪಿ ಅವರಿಂದ ಬಂದ ಪತ್ರ ಇಲ್ಲಿದೆ.

160
01:07:01,226 --> 01:07:03,895
ಅವರು, "ಪ್ರತಿ ವರ್ಷ ನಾನು ನಿಮ್ಮ
ಕಾರ್ಯಕ್ರಮವನ್ನು ಕೇಳುತ್ತೇನೆ" ಎನ್ನುತ್ತಾರೆ.

161
01:07:03,979 --> 01:07:05,063
ಧನ್ಯವಾದ, ಪಿ.

162
01:07:05,147 --> 01:07:10,318
"ಮತ್ತು ಹಿಂದಿನ ಕ್ರಿಸ್‌ಮಸ್‌ಗಳಲ್ಲಿ ಒಟ್ಟಿಗೆ
ಸಮಯ ಕಳೆದ ಜನರನ್ನು ನೆನೆಪಿಸಿಕೊಳ್ಳುತ್ತೇನೆ,

163
01:07:10,402 --> 01:07:12,195
ತಿನ್ನುತ್ತಲೋ, ಕೊಲ್ಲುತ್ತಲೋ, ಹೇಗೇ ಇರಲಿ."

164
01:07:12,279 --> 01:07:16,032
"ನಾವು ದರೋಡೆ ಮಾಡುವಾಗ
ನಮ್ಮ ಗುರುತುಗಳನ್ನು ಮರೆಮಾಚಲು

165
01:07:16,116 --> 01:07:19,953
ನನ್ನೊಂದಿಗೆ ಕ್ಯಾರೋಲ್ ಹಾಡಲು ಬಂದ
ಜಿಮ್ಮಿ ಕೇನ್‌ನಂತೆ."

166
01:07:20,579 --> 01:07:24,207
"ಹಂಚಿಕೊಳ್ಳುವ ಸರದಿ ಬಂದಾಗ
ಸ್ವಲ್ಪ ದುರಾಸೆ ತೋರಿದ."

167
01:07:24,291 --> 01:07:26,460
"ಹಾಗಾಗಿ ಅವನ ತಲೆಗೆ ಗುಂಡಿಡಬೇಕಾಯಿತು."

168
01:07:27,294 --> 01:07:31,715
"ಅಥವಾ ಮೆಲಿಸ್ಸಾ,
ನಮ್ಮ ಕುಸಿದ ಶಿಪ್ಪಿಂಗ್ ಕಂಟೇನರ್‌ನ ಹಾಲ್‌ಗಳನ್ನು

169
01:07:31,798 --> 01:07:34,718
ಎಲ್ಲಾ ರೀತಿಯ ವಿಕಿರಣಶೀಲ ಮಿಂಚುವ ಕೀಟಗಳೊಂದಿಗೆ

170
01:07:34,801 --> 01:07:38,305
ಉತ್ಸಾಹಭರಿತ ಕ್ರಿಸ್ಮಸ್ ಶೈಲಿಯಲ್ಲಿ

171
01:07:38,388 --> 01:07:40,515
ಅಲಂಕರಿಸುತ್ತಿದ್ದವಳು."

172
01:07:41,224 --> 01:07:45,270
"ಅವಳಲ್ಲಿ ತುಂಬಾ ಗೆಡ್ಡೆಗಳು ಬೆಳೆದವು,
ಹಾಗಾಗಿ ಅವಳಿಗೆ ಕಷ್ಟ ಬೇಡ ಅಂತ ಸಾಯಿಸಿಬಿಟ್ಟೆ."

173
01:07:47,147 --> 01:07:49,566
"ಮತ್ತು ಬಿಗ್ ಸಾರಾಳನ್ನು ಹೇಗೆ ಮರೆಯಲಿ,

174
01:07:49,649 --> 01:07:53,069
ನಮ್ಮ ಉಪಕರಣಗಳನ್ನು ಕಟ್ಟಿದ್ದಕ್ಕೆ

175
01:07:53,153 --> 01:07:56,656
ಕೆಲವು ಬ್ರಾಹ್ಮಿಣ್‌ಗಳು ಕೋಪಗೊಂಡಾಗ,
ನಮ್ಮ ಹಿಮಬಂಡಿಯ ನಾಯಕತ್ವ ವಹಿಸಿ

176
01:07:56,740 --> 01:08:01,077
ವೇಸ್ಟ್‌ ಲ್ಯಾಂಡ್‌ನಾದ್ಯಂತ ನೂರು ಮೈಲುಗಳಿಗಿಂತ
ಹೆಚ್ಚು ದೂರವನ್ನು ಕ್ರಮಿಸಿ ಕಾಪಾಡಿದವಳು."

177
01:08:01,161 --> 01:08:03,663
"ಆದರೆ ಅವಳು ನನಗೆ ಸರಿಯಾಗಿ ಧನ್ಯವಾದ ಹೇಳಲಿಲ್ಲ,

178
01:08:03,747 --> 01:08:06,249
ಹಾಗಾಗಿ ಅವಳ ತಲೆಗೂ ಗುಂಡಿಟ್ಟು ಕೊಲ್ಲಬೇಕಾಯಿತು."

179
01:08:06,750 --> 01:08:13,089
"ಆದರೆ ಅವಳ ನೆನಪು ಕಾಡುತ್ತೆ,
ಯಾಕೆಂದರೆ ನಾನು ತುಂಬಾ ಸಮಯ

180
01:08:13,173 --> 01:08:17,511
ಅವಳ ಕಾಲುಗಳ ತುಂಬಿದ ಮಾಂಸವನ್ನು
ಒಣಗಿಸುತ್ತಾ, ಆನಂದಿಸುತ್ತಾ ತಿಂದೆ."

181
01:08:17,594 --> 01:08:20,055
"ಅವಳ ಕಾಲುಗಳು ದೊಡ್ಡದಾಗಿ, ಅದ್ಭುತವಾಗಿದ್ದವು."

182
01:08:20,138 --> 01:08:23,517
"ಕಾಮುಕನಂತೆ ಹೇಳುತ್ತಿಲ್ಲ,
ಹಸಿದ ವ್ಯಕ್ತಿಯಾಗಿ ಹೇಳುತ್ತಿದ್ದೇನೆ."

183
01:08:24,434 --> 01:08:27,896
"ಅವಳ ಒಂದು ಕಾಲಲ್ಲಿ ದೊಡ್ಡ ಗೆಡ್ಡೆ ಸಿಕ್ಕಿತು

184
01:08:27,979 --> 01:08:30,398
ಮತ್ತು ಆ ಗೆಡ್ಡೆಯಲ್ಲಿ
ಒಂದು ಹಲ್ಲು ಬೆಳೆಯುತ್ತಿತ್ತು."

185
01:08:30,899 --> 01:08:35,028
"ದಯವಿಟ್ಟು ನನಗಾಗಿ,
'ಏಂಜೆಲ್ಸ್ ವಿ ಹ್ಯಾವ್ ಹರ್ಡ್ ಆನ್ ಹೈ' ನುಡಿಸಿ."

186
01:17:27,685 --> 01:17:30,229
ನಾನು ಡಿಜೆ ಮಿ. ನ್ಯೂ ವೇಗಸ್.

187
01:17:30,313 --> 01:17:32,857
ಪರಸ್ಪರ ಒಬ್ಬರಿಗೊಬ್ಬರು ನಾವು ಇರುವವರೆಗೆ,

188
01:17:32,940 --> 01:17:36,986
ಕೆಟ್ಟ ಜೀವನದಲ್ಲಿ ನಾವು ಒಂಟಿಯಲ್ಲ.

189
01:17:37,653 --> 01:17:41,032
ಹಾರ್ಟ್‌ಲ್ಯಾಂಡ್‌ನಲ್ಲಿರುವ
ಹಾರ್ಡ್ ಟೆಡ್ ಅವರ ಪತ್ರ ಇಲ್ಲಿದೆ.

190
01:17:41,741 --> 01:17:44,744
ಟೆಡ್ "ದಯವಿಟ್ಟು 'ಲೆಟ್ ಇಟ್ ಸ್ನೋ' ನುಡಿಸಿ"
ಎಂದು ಬರೆಯುತ್ತಾರೆ.

191
01:17:44,827 --> 01:17:46,704
"ನನಗೆ ಹಿಮದ ನೆನಪಾಗುತ್ತೆ."

192
01:17:46,788 --> 01:17:49,540
"ಅದು ತುಂಬಾ ಚಳಿಗಾಲ ಅನಿಸುತ್ತೆ,

193
01:17:49,624 --> 01:17:54,170
ಆದರೆ ಅಚಾನಕ್ಕಾಗಿ ಯುರೇನಿಯಮ್ ಅನ್ನು
ನೆಕ್ಕಿದಾಗ ಆಗುವ ಚಳಿ ಅಲ್ಲ,

194
01:17:54,253 --> 01:17:59,467
ಅಥವಾ ಶಿಲೀಂಧ್ರ ಬೆಳೆದಿರುವಂಥ ಸಂದಿಯಲ್ಲಿ
ಮಲಗಿದಾಗ ಆಗುವ ಚಳಿಯಲ್ಲ."

195
01:17:59,550 --> 01:18:03,805
"ಬರೀ ಸುಡುವ ಹೊಟ್ಟುಗಳಿಂದ ಉದುರುವ
ವಿಕಿರಣಶೀಲದ ಹಿಮ ಅಲ್ಲದೇ,

196
01:18:03,888 --> 01:18:06,641
ಒಳ್ಳೆಯ ಹಿಮ ನೋಡಬೇಕೆಂದು ಆಸೆ ಆಗಿದೆ."

197
01:18:06,724 --> 01:18:08,017
"ನನಗೆ ನೆನಪಿದೆ,

198
01:18:08,101 --> 01:18:12,730
ಅದೇನದು, ಮೋಡ ಅಲ್ವಾ, ಅದರಿಂದ ಬರುತ್ತಿದ್ದ ಹಿಮ."

199
01:18:12,814 --> 01:18:16,776
"ಹಿಮದಲ್ಲಿ ಜಾರುವುದು ಹೇಗೆ
ಎಂದು ನೆನಪಿಸಿಕೊಳ್ಳಲು ನೋಡುತ್ತಿದ್ದೆ,

200
01:18:16,859 --> 01:18:20,363
ಆದರೆ ಯಾಕೋ ಏನೋ,
ಅದನ್ನು ನೆನಪಿಸಿಕೊಳ್ಳಲು ಹೋದಾಗಲೆಲ್ಲಾ

201
01:18:20,446 --> 01:18:25,118
ಸುಟ್ಟ ಶವಗಳಿಂದ, ಅವುಗಳ ಮೂಳೆಗಳಿಂದ
ಚರ್ಮ ಸುಲಿದು ಬರೋದೇ ನೆನಪಾಗುತ್ತದೆ."

202
01:18:25,201 --> 01:18:27,829
"ಕಳೆದ ವರ್ಷ ನಾನು ಹಿಮ ನೋಡಿದೆ ಅಂದುಕೊಂಡೆ,

203
01:18:27,912 --> 01:18:33,793
ಆದರೆ ಅದು ಅಸಲಿಗೆ ಕೊಟ್ಟಿಗೆಯಿಂದ
ಹಾರಿಬರುತ್ತಿದ್ದ ಟನ್‌ಗಟ್ಟಲೆ ಗೆದ್ದಲುಗಳು."

204
01:18:33,876 --> 01:18:36,045
"ಆ ಕೊಟ್ಟಿಗೆಯಲ್ಲಿ ಅದೇನಿತ್ತೋ,

205
01:18:36,129 --> 01:18:40,299
ಗೆದ್ದಲುಗಳ ಸಾಂಕ್ರಾಮಿಕತೆಗಿಂತ
ಕೆಟ್ಟದಾಗಿತ್ತು ಅನಿಸುತ್ತೆ."

206
01:18:40,383 --> 01:18:43,344
"ಈಗ ನಾನು ಹಾಗೇ ಯೋಚಿಸೋದು."

207
01:18:43,845 --> 01:18:46,889
ನಾವೆಲ್ಲರೂ ಹಾಗೇ ಯೋಚಿಸೋದು, ಟೆಡ್.
ಮೆರಿ ಕ್ರಿಸ್ಮಸ್.

208
01:18:46,973 --> 01:18:48,391
ಕೆಲವು ಮದ್ದುಗಳನ್ನು ನುಂಗಿ,

209
01:18:48,474 --> 01:18:53,187
ನಿನ್ನ ಸನ್ನಿವೇಶವನ್ನು ಮರೆಯಲು ಆಗುತ್ತಾ ನೋಡು.

210
01:29:11,346 --> 01:29:13,348
ಅಲ್ಲಿಗೆ ಮುಕ್ತಾಯ, ಮಕ್ಕಳೇ.

211
01:29:15,184 --> 01:29:16,894
ನೀವೆಲ್ಲಾ ಜೀವಂತ ಉಳಿಯಿರಿ.

212
01:29:16,977 --> 01:29:18,729
ನಿಜ ಹೇಳಬೇಕೆಂದರೆ, ನಾನಂತೂ ಇಲ್ಲ.

213
01:29:18,812 --> 01:29:22,316
ಈಗ ನಾನು ಮಿ. ನ್ಯೂ ವೇಗಸ್ ವಿದಾಯ ಹೇಳುತ್ತಿರುವೆ.

214
01:29:22,941 --> 01:29:28,155
ಎಲ್ಲರಿಗೂ ಮೆರಿ ಕ್ರಿಸ್ಮಸ್ ಮತ್ತು ಶುಭ ರಾತ್ರಿ.



